ದೇವ್ ನೆಸ್ಟ್ ಬರಹ
ಜಾಹಿರಾತಿನ ಮೇಲೆ ಲಕ್ಷಾಂತರ ರೂಪಾಯಿಗಳನ್ನು ವ್ಯಯಿಸುವ ಉದ್ಯಮಿಗಳ ಬಗ್ಗೆ ನನಗೆ ಮರುಕವಿದೆ. ಒಮ್ಮೆ ಜಾಹಿರಾತು ನೀಡಿ ಗೆದ್ದೆನೆಂದು ಸುಮ್ಮನಿರುವ ಹಾಗಿಲ್ಲ. ಜಾಹಿರಾತಿನ ವೈಖರಿಯನ್ನು ಬದಲಾಯಿಸುತ್ತಿರಬೇಕು, ಪದೇಪದೇ ಮಾಧ್ಯಮಗಳ ಬಾಗಿಲು ತಟ್ಟಿ ಲಕ್ಷ ಸುರಿದು ಪ್ರಕಟಣೆಯನ್ನು ಯಾಚಿಸಬೇಕು. ಚಾಲ್ತಿಯಲ್ಲಿರಲು ಹಾಗೆ ಮಾಡಬೇಕಾದ್ದು ಅನಿವಾರ್ಯವೆಂದು ಅನೇಕರು ಭಾವಿಸುತ್ತಾರೆ.
ಚೆಲ್ಲಿದ ಹಣವನ್ನು ಹಿಂಪಡೆಯಲು ಆ ಉದ್ಯಮಿಗಳು ತಾವು ಉತ್ಪಾದಿಸಿದ ಪದಾರ್ಥಗಳ ಬೆಲೆ ಏರಿಸುತ್ತಾರೆ. ಅದರಿಂದ ಹೇಳಿಕೊಳ್ಳುವ ಮಟ್ಟದ ಪ್ರಯೋಜನವಾಗುವುದಿಲ್ಲ. ಕಾರಣ, ಅವೇ ಪದಾರ್ಥಗಳು ಗೃಹ ಕೈಗಾರಿಕೆಗೆ ಹೆಸರುವಾಸಿಯಾದ, ಜಾಹಿರಾತಿನ ಮೊರೆ ಹೊಗದ, ಸಾಮಾನ್ಯ ಜನರ ಮೂಲದಿಂದ ಸರಬರಾಜಾಗಿ ಮಾರುಕಟ್ಟೆಯನ್ನು ಆಕ್ರಮಿಸಿಕೊಂಡುಬಿಡುತ್ತವೆ.
ಮೇಲಿನ ಪರಿಸ್ಥಿತಿಯನ್ನು ಎದುರಿಸುತ್ತ ಚಾಲ್ತಿಯಲ್ಲಿರಲು ಅಂತರ್ಜಾಲದ ಸದುಪಯೋಗ ಪಡೆಯುವುದು ಸೂಕ್ತ. ದಿನದ ಒಂದು ಸನ್ನಿವೇಶವನ್ನು ಮೊಬೈಲ್ ಫೋನಿನಲ್ಲಿ ಸೆರೆಹಿಡಿದು, ಆ ಸನ್ನಿವೇಶ ಕುರಿತು ನಾಲ್ಕು ವಾಕ್ಯ ಬರೆದು ಚಿತ್ರಸಮೇತ ಪ್ರಕಟಿಸಿದರೆ ಧಾರಾಳವಾಗಿಹೋಯಿತು, ಚಾಲ್ತಿಯಲ್ಲಿರಲು ಅಷ್ಟು ಸಾಕು! ದಿನಕ್ಕೆ ಒಂದೆಂದರೂ ತಿಂಗಳಿಗೆ ಅದು ಮೂವತ್ತಾಗಿಹೋಯಿತು, ಮೂವತ್ತು ಲಕ್ಷ ಕೈ ಜಾರುವುದು ತಪ್ಪಿತು!!!
ಅಷ್ಟನ್ನು ಉದ್ಯಮಿಗಳು, ತಮ್ಮ ಉದ್ಯಮಕ್ಕೋ, ಉತ್ಪಾದನೆಗೋ, ಸ್ವಂತ ವಿಷಯಕ್ಕೋ ಸಹಾಯಕವಾಗುವಂತೆ - ನಸುಕಿನಲ್ಲಿ ಎದ್ದು ಇರುಳಿನಲ್ಲಿ ನಿದ್ರೆಗೆ ಜಾರುವ ಮಧ್ಯೆ 15-16 ತಾಸುಗಳ ಅವಧಿಯಲ್ಲಿ ಸಾವಿರಾರು ದೃಶ್ಯಗಳನ್ನು ಕಣ್ತುಂಬಿಕೊಳ್ಳುವ ಹಿನ್ನೆಲೆಯಲ್ಲಿ - ಸಾಧಿಸುವಂತಾಗಲಿ.
ಪ್ರಿಂಟ್ ಮೀಡಿಯಾಗೆ ಪರ್ಯಾಯವಾಗಿ ಅಂತರ್ಜಾಲವು ಬೆಳೆದು ನಿಲ್ಲುವ ಕಾಲ ದೂರವಿಲ್ಲವೆಂಬುದನ್ನು ಮರೆಯದಿರೋಣ.
ಆಸಕ್ತರು ಹೆಚ್ಚಿನ ವಿವರಗಳಿಗಾಗಿ ಎಂ ಎಂ ದೇವ್ ಅವರನ್ನು ಮೊಬೈಲ್ ಫೋನ್ ಸಂಖ್ಯೆ 91 725 909 3200 (WhatsApp) ಅಥವಾ ಇಮೇಲ್ drmmd.intimate@gmail.com; dni.prcapital@gmail.com ಮೂಲಕ ಸಂಪರ್ಕಿಸಬಹುದು.
ಅನಿಸಿಕೆ
[05/04, 15:34] Shyamasundara: ಜಾಹಿರಾತಿನ ಕರಾಳ ಹಸ್ತದಿಂದ ಬಚಾವಾಗಲು ನೈತಿಕ ದೈರ್ಯ ಬೇಕು.
[05/04, 19:54] B S Ranganath: ನಿಸ್ಸಂಶಯವಾಗಿ.
