ವೃತ್ತಿಪರರಲ್ಲಿ ಕೆಲವರು ಸಂಪಾದಿಸುವುದು ಗೌರವವನ್ನಷ್ಟೇ. ಸಂಪರ್ಕಗಳಷ್ಟೇ ಅವರ ಉಳಿತಾಯ. ಸಂಸಾರ ತೂಗಿಸಿಕೊಂಡು ಹೋಗಲು ಹರಸಾಹಸ ಮಾಡುವ ಅವರು ಸದಾ ಖುಷಿಯಾಗಿರುವುದಂತೂ ಖಂಡಿತ. ಈ ವಿಚಾರಕ್ಕೆ ನಾನೇ ಒಂದು ಉದಾಹರಣೆ.
ಹೋಲಿಸಿ ನೋಡದೆ ಉದಾಹರಣೆ ನೀಡಲು ಸಾಧ್ಯವಿಲ್ಲ. ಆದ್ದರಿಂದ ಬಹುರಾಷ್ಟ್ರೀಯ ಕಂಪನಿಯೊಂದರ ನಿರ್ವಾಹಕ (manager) ಓರ್ವನ/ಳ ಸ್ಥಾನಮಾನಗಳನ್ನು ಗಮನಿಸೋಣ. ಅವನಿ/ಳಿಗೆ ಕನಿಷ್ಠ ತಿಂಗಳಿಗೆ ಮೂರು ಲಕ್ಷ ರೂ ಸಂಬಳ ದೊರೆಯುವುದು ನಿಶ್ಚಿತ. ಅವನ/ಳ ಕೇವಲ ಹತ್ತನೇ ಒಂದು ಭಾಗದಷ್ಟು ವರಮಾನವನ್ನೂ ನಾನು ಕಲ್ಪಿಸಿಕೊಳ್ಳಲಾರೆ. ಆದರೆ ಕೆಲಸದ ಒತ್ತಡ ನನ್ನಷ್ಟು ಸಂತೋಷದಿಂದಿರಲು ಅವನ/ಳನ್ನು ಬಿಡುವುದೇ? ಉಹೂಂ. ನನ್ನ ಅನಂದಾತಿರೇಕದ ಹತ್ತನೇ ಒಂದು ಭಾಗವೂ ಅವರಿಗೆ ಕನಸೇ. ಅದೇಕೆ ಎಂಬುದನ್ನು ನಿಮ್ಮ ವಿಚಾರಕ್ಕೆ ಬಿಡುತ್ತೇನೆ.
ಗೌರವವು ಕೈ ಬೀಸಿ ಕರೆಯುತ್ತಿರುವ, ಇದನ್ನು ಪೂರ್ತಿ ಮಾಡಿದ ಮೇಲಷ್ಟೇ ಕನಿಷ್ಠ ಸಂಭಾವನೆಯನ್ನು ನಿರೀಕ್ಷಿಸಬಹುದಾದ ಮೇಲ್ಕಂಡ ಕಲಾಕೃತಿಯ ಹೆಗ್ಗಳಿಕೆಯನ್ನು ಸಂಕ್ಷಿಪ್ತವಾಗಿ ವಿವರಿಸುವುದೇ ಈ ಅಂಚೆಯ ಉದ್ದೇಶ. ಇದರ ಶೀರ್ಷಿಕೆ ಮದರ್ಸ್ ಗಿಫ್ಟ್ ಟು ಇಂಡಿಯಾ. ವಿಶಿಷ್ಟ ಕೆತ್ತನೆಯ ಈ ಮರದ ಕಲಾಕೃತಿ, ಸುವಿಖ್ಯಾತ ಕಲಾವಿದ ಭಾನುಪ್ರಕಾಶ್ ಆಚಾರ್ಯ ಅವರ ನಿರ್ದೇಶನದಲ್ಲಿ ಮಹತ್ತರವಾಗಿ ರೂಪುಗೊಂಡಿದೆ.
ಈ ಕಲಾಕೃತಿಯ ಚೌಕಟ್ಟು 7'0" (ಏಳು ಅಡಿ ಉದ್ದ) x 6'0" (ಆರು ಅಡಿ ಎತ್ತರ) ವಿಸ್ತೀರ್ಣವನ್ನು ಹೊಂದಿದ್ದು, ವಿಶೇಷವಾಗಿ ತಯಾರಿಸಲ್ಪಟ್ಟ ವಿವಿಧ ಮರದ (ಸುಮಾರು 6000) ಪದರಗಳ ಅಳವಡಿಕೆಯನ್ನು ಒಳಗೊಂಡಿದ್ದು. ದ್ವಿದಶ (20) ಅಸದೃಶ ಕಲೆಗಾರರ ಕುಸುರಿ ಕೆಲಸದ ಚಮತ್ಕಾರದೊಂದಿಗೆ ಆರು ತಿಂಗಳ ಪರಿಶ್ರಮದ ಸಮೇತ ಅದ್ಭುತವಾಗಿ ಹೊರಹೊಮ್ಮಿದೆ. ವಿಡಿಯೋ ಮತ್ತು ಚಿತ್ರರೂಪದಲ್ಲಿ ಆ ಪರಿಶ್ರಮವಿದೋ:
ಯಾವ ಕುಸುರಿಯ ಆಗರ ಈ ಕಲಾಕುಸುಮದ ನಿರ್ಮಾಣಕ್ಕೆ ಮುಂದಾಗಿದೆ ಎಂಬುದನ್ನು ವಿವರವಾಗಿ ಅರಿಯಲು ಈ ವಿಡಿಯೋ ಮತ್ತು ಚಿತ್ರಗಳನ್ನು ನೋಡಿ:
ಇದರ ಮಾರಾಟದಿಂದ ಲಭ್ಯವಾಗುವ ಮೊತ್ತವನ್ನು ಒಂದು ವರ್ಷವಿಡೀ ಇದಕ್ಕಾಗಿ ಶ್ರಮದಾನ ನೀಡಿರುವ ಕಲಾವಿದರಿಗೆ ಹಂಚಲಾಗುವುದು.
ಆಸಕ್ತರು ಹೆಚ್ಚಿನ ವಿವರಗಳಿಗಾಗಿ ಎಂ ಎಂ ದೇವ್ ಅವರನ್ನು ಮೊಬೈಲ್ ಫೋನ್ ಸಂಖ್ಯೆ 91 725 909 3200 (WhatsApp) ಅಥವಾ ಇಮೇಲ್ drmmd.intimate@gmail.com; dni.prcapital@gmail.com ಮೂಲಕ ಸಂಪರ್ಕಿಸಬಹುದು.