ದೇವ್ ನೆಸ್ಟ್ ಬರಹ
ಕೆಲವು ಸ್ನೇಹಿತರೊಂದಿಗೆ ಕಳೆದ ದಿನಗಳನ್ನು ಮರೆಯಲು ಸಾಧ್ಯವಿಲ್ಲ. ದೀನರ ನೆರವಿಗಾಗಿ ತಮ್ಮ ಹಸ್ತವನ್ನು ನಿರಂತರವಾಗಿ ಚಾಚಿರುತ್ತಿದ್ದ ಅಂಥ ಸ್ನೇಹಿತರು ಸ್ವತಃ ಅಸಹಾಯಕರಾದಾಗ ಎದುರಾಗುವ ಪರಿಸ್ಥಿತಿ ಊಹಾತೀತ. ಸಕಲವನ್ನೂ ತ್ಯಾಗ ಮಾಡಿ ಅವರನ್ನು ಪೂರ್ಣಾರೋಗ್ಯದ ಸ್ಥಿತಿಗೆ ತರಬೇಕೆಂದು ಮನಸ್ಸು ಹಾತೊರೆಯುತ್ತದೆ.
ನನ್ನ ಆಪ್ತ ಮಿತ್ರ ಶಂಕರರಾವ್ ಅಂಥ ಸ್ಥಿತಿಯಲ್ಲಿದ್ದಾರೆ. ಹಲವು ತಿಂಗಳುಗಳಿಂದ ಪ್ರತಿ ದಿನ ಅವರ ಜೊತೆ ಇದ್ದು ಮುಂದೇನು ಮಾಡುವುದೆಂದು ತಿಳಿಯದೆ ತೊಳಲುತ್ತಿದ್ದೇನೆ. ನನ್ನ ಕೈ ಕಟ್ಟಿದೆ, ಯಾರ ನೆರವನ್ನು ಬೇಡಿ ಅವರ ಆರೋಗ್ಯ ಮರಳುವಂತೆ ಮಾಡಿಯೇನೆಂಬುದು ಅರ್ಥವಾಗದಾಗಿದೆ. ನನ್ನ ಬದುಕಿನಲ್ಲಿ ಕೆಲವು ಒಳ್ಳೆಯ ಅಭ್ಯಾಸಗಳನ್ನು ಬೆಳೆಸಿಕೊಳ್ಳಲು ಅವರೆಷ್ಟು ಸಹಾಯಕರಾದರು ಎಂಬ ನೆನಪಿನ ಚಿತ್ರ ಸದಾ ಮನದ ಮುಂದೆ ಸುಳಿದಾಡುತ್ತಿದೆ.
ನನ್ನ ಜೀವನಾಡಿಯು ಸಮರ್ಪಕವಾಗಿ ಮಿಡಿಯಲು ಏಕೈಕ ಕಾರಣಳಾಗಿದ್ದ ನನ್ನ ಪತ್ನಿಯನ್ನು ಕಳೆದುಕೊಂಡ ಅಘಾತದಿಂದ ನಾನಿನ್ನೂ ಚೇತರಿಸಿಕೊಂಡಿಲ್ಲ. ಅಷ್ಟರಲ್ಲಿ ಇಂಥ ವಿಷಮ ಸ್ಥಿತಿಗೆ ಜೀವದ ಗೆಳೆಯ ಶಂಕರರಾವ್ ತಲುಪಿದ್ದಾರೆ. ಕಿಡ್ನಿಗಳೆರಡೂ ವಿಫಲವಾಗಿ ವಾರಕ್ಕೆರಡು ಬಾರಿ ಡಯಾಲಿಸಿಸ್ ಚಿಕಿತ್ಸೆಯನ್ನು ಅವರು ಪಡೆಯುತ್ತಿದ್ದಾರೆ. ಆ ಚಿಕಿತ್ಸೆಗೆ ಪ್ರತಿ ಮಾಹೆ ಐವತ್ತು ಸಾವಿರ ರೂ ವೆಚ್ಚವಾಗುತ್ತಿದ್ದು, ಖಜಾನೆ ಬರಿದಾಗಿದೆ.
ಬೆಂಗಳೂರಿನ Baptist ಆಸ್ಪತ್ರೆಯಲ್ಲಿ ಅವರ ಚಿಕಿತ್ಸೆ ಸಾಗಿದ್ದು, ಇನ್ನು ಮುಂದೆ ಅವರಿಗೆ ವಾರಕ್ಕೆ ಮೂರು ಬಾರಿ ಡಯಾಲಿಸಿಸ್ ಚಿಕಿತ್ಸೆ ನೀಡಬೇಕಾದ್ದು ಅನಿವಾರ್ಯ ಎಂದು ವೈದ್ಯರು ತಿಳಿಸಿದ್ದಾರೆ. ಈ ಪರಿಸ್ಥಿತಿಯನ್ನು ಎದುರಿಸಲು ನನಗೆ ಉಳಿದಿರುವ ಮಾರ್ಗ ಸಮುದಾಯದ ಸಹಾಯವನ್ನು ಅಪೇಕ್ಷಿಸುವುದೊಂದೇ.
ಈ ನಮ್ರ ವಿನಂತಿಗೆ ಮನಃಪೂರ್ವಕವಾಗಿ ಸ್ಪಂದಿಸಬೇಕೆಂದು ಪ್ರಾರ್ಥಿಸುತ್ತೇನೆ.
ಮಾನವತಾವಾದಿ ಶಂಕರರಾವ್ ಮೊದಲಿನಂತಾಗಿ, ಅನೇಕರಿಗೆ ಮಾರ್ಗದರ್ಶನ ನೀಡುವ ಸಾಮರ್ಥ್ಯ ಅವರಿಗೆ ಪ್ರಾಪ್ತವಾಗಲಿ ಎಂಬ ಸದಿಚ್ಛೆ ಉಳ್ಳವರು ಗೂಗಲ್ ಪೇ ಮುಖಾಂತರ ಸಹಾಯ ಧನವನ್ನು (ಅವರ ಬ್ಯಾಂಕ್ ಖಾತೆ ವಿವರ: G Shankar Rao, Bank of Baroda, SB A/c No: 73890100021472, IFSC Code: BARB0VJMAYO, M G Road Branch, Bangalore-560 042) ಅವರಿಗೆ ತಲುಪಿಸಬಹುದು.

No comments:
Post a Comment