ವೃತ್ತಿಪರರು ತಾವು ಕಾರ್ಯ ನಿರ್ವಹಿಸುವ ಗುಟ್ಟನ್ನು ಬಿಟ್ಟುಕೊಡುವುದಿಲ್ಲ. ಅವರಿಗಿರುವ ಭಯ ಒಂದೇ - ನಕಲೀಕರಣ ಉಂಟಾಗಿ ತಮ್ಮ ಅನ್ನಕ್ಕೆ ಕಲ್ಲು ಬೀಳುತ್ತದೆ ಎಂಬುದು. ಅಂಥ ಭಯ ಅನಗತ್ಯವೆಂಬುದು ನನ್ನ ಭಾವನೆ.
ಪ್ರಕೃತಿ ಪ್ರತಿಯೊಬ್ಬರನ್ನೂ ವಿಭಿನ್ನವಾಗಿ ಸೃಷ್ಟಿಸಿದೆ ಎಂಬುದನ್ನು ಮರೆಯುವ ಹಾಗಿಲ್ಲ. ಪ್ರಕೃತಿಯಿಂದ ದೊರೆತ ಮತ್ತೊಂದು ವರದಾನ - ನಮಗೆ ಗೊತ್ತಿರುವುದನ್ನು ಇನ್ನೊಬ್ಬರಿಗೆ ಹೇಳಿಕೊಟ್ಟರೆ ಈಗಿನದಕ್ಕಿಂತ ಒಂದು ಹಂತ ಎತ್ತರಕ್ಕೆ ಬೆಳೆಯುವುದು. ಪ್ರಕೃತಿಯ ನಿಯಮದ ಪ್ರಕಾರ ನಮ್ಮಿಂದ ಪಾಠ ಕಲಿಯುವವರು ನಮ್ಮ ಶಿಷ್ಯರು. ಅವರು ಶಿಷ್ಯರಿಗಿರಬೇಕಾದ ವಿಧೇಯತೆಯನ್ನು ಉಳಿಸಿಕೊಳ್ಳದೆ ಹೋದರೆ ಅದಕ್ಕೆ ತಕ್ಕ ಪಾಠವನ್ನು ಪ್ರಕೃತಿಯೇ ಅವರಿಗೆ ಕಲಿಸುತ್ತದೆ! ಗುರುವಿನ ಬತ್ತಳಿಕೆಯಲ್ಲಿ ಶಿಷ್ಯನಿಗೆ ಅರ್ಥವಾಗದ ಒಂದು ರಹಸ್ಯವು ಇದ್ದೇ ಇರುತ್ತದೆ - ಇದೇ ಪ್ರಕೃತಿ ವಿಧಾನ!!!
ಆದ್ದರಿಂದ, ಮುಚ್ಚುಮರೆಯಿಲ್ಲದೆ ನನ್ನ ಕಾರ್ಯ ವಿಧಾನವನ್ನು ನಿಮ್ಮೊಂದಿಗೆ ಹಂಚಿಕೊಂಡು, ನೀವು ಹೆಮ್ಮೆ ಪಡುವ ರೀತಿಯಲ್ಲಿ ನೀವು ನನಗೆ ವಹಿಸುವ ಕೆಲಸವನ್ನು ನಿರ್ವಹಿಸಿ, ಪೂರ್ಣಗೊಳಿಸುವೆನೆಂಬ ಭರವಸೆಯನ್ನು ಇದೋ ನೀಡುತ್ತಿದ್ದೇನೆ.
ದೂರವಾಣಿ ಸಂಖ್ಯೆ 91-7259093200 ಎಡೆಬಿಡದೆ ಚಾಲ್ತಿಯಲ್ಲಿದ್ದು ನನ್ನ ಅಚ್ಚುಮೆಚ್ಚಿನವರಾದ ನಿಮ್ಮೆಲ್ಲರ ಅಮೂಲ್ಯವಾದ ಕರೆಗಳ ನಿರೀಕ್ಷೆಯಲ್ಲಿರುತ್ತದೆ.
No comments:
Post a Comment